Let's be Together

Extra info thumb
  • 9844458881
  • vishwaradhyacancerhospital2019@gmail.com

ಎಲ್ಲಾ ಓಕೆ , ಕ್ಯಾನ್ಸರ್ ಯಾಕೆ ? ಫೆಬ್ರವರಿ 04 ವಿಶ್ವ ಕ್ಯಾನ್ಸರ್ ದಿನಾಚರಣೆ

Published on 29 May 2026

Blog Image

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಳ ಕಂಡಿರುವುದು ಕಳವಳಕಾರಿ ಸಂಗತಿ.ಅದರಲ್ಲೂ ಕ್ಯಾನ್ಸರ್ ಮಹಾಮಾರಿ ಅತಿ ಹೆಚ್ಚಾಗಿರುವುದು ದುರದೃಷ್ಟಕರ, ಇದು ಹೆಚ್ಚಾಗಿ ಯುವ ಪೀಳಿಗೆಯಲ್ಲಿ ಪತ್ತೆಯಾಗುತ್ತಿರುವುದು ವಿಷಾದನೀಯ.

ಇದರಿಂದಾಗಿ ಮುಂದೆ ಉ೦ಟಾಗುವ ಅನಾಹುತ ತಡೆಗಟ್ಟುವ ಸಲುವಾಗಿ ವಿಶ್ವ ಕ್ಯಾನ್ಸರ್ ದಿನವನ್ನು UICC (Union for International Cancer Control) ಅವರ ನೇತೃತ್ವದಲ್ಲಿ ಪ್ರತಿವರ್ಷ ಫೆಬ್ರವರಿ 4ರಂದು ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಕ್ಯಾನ್ಸರ್ ದಿನಾಚರಣೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ತನ್ನ ಬೆಂಬಲವನ್ನು ನೀಡುತ್ತದೆ. 2008ರಲ್ಲಿ ರೂಪಿಸಲಾದ ‘ವಿಶ್ವ ಕ್ಯಾನ್ಸರ್ ಘೋಷಣೆ’ಯ ಉದ್ದೇಶಗಳು ಮತ್ತು ಗುರಿಗಳನ್ನು ಬೆಂಬಲಿಸುವುದು ಈ ದಿನಾಚರಣೆಯ ಪ್ರಮುಖ ಆಶಯವಾಗಿದೆ. ಈ ಮೊದಲೆಲ್ಲಾ ಕ್ಯಾನ್ಸರ್ ಮಹಾಮಾರಿ ಅಷ್ಟು ಹೆಚ್ಚಾಗಿ ಕಾಣಿಸುತ್ತಿರಲಿಲ್ಲ.2014 ನೇ ಸಾಲಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು ಹಾಗೂ ಹೆಚ್ಚಳವಾಗುತ್ತಲೇ ಇದೆ. 2025 ರಲ್ಲಿ ಸುಮಾರು 12.8% ಪ್ರಮುಖವಾಗಿ ಕಂಡುಬಂದಿದ್ದು 2026 ರಲ್ಲಿ 24.6% ಹೆಚ್ಚಳವಾಗಬಹುದು ಎಂದು ವೈಜ್ಞಾನಿಕ ಲೆಕ್ಕಾಚಾರದ ಪ್ರಕಾರ ಅಂದಾಜು ಮಾಡಲಾಗಿದೆ.

ಇದರಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ಸಾವಿಗೀಡಾಗುವರ ಸಂಖ್ಯೆ ಕೂಡ ಮುಂಚೂಣಿಯಲ್ಲಿದೆ.2022 ರಲ್ಲಿ ಸರಾಸರಿ 9.7 ಮಿಲಿಯನ್ ಜನರು ಕ್ಯಾನ್ಸರ್‌ ನಿಂದ ಸಾವಿಗೀಡಾಗಿರುವುದು ವರದಿಯಾಗಿದೆ.ಕ್ಯಾನ್ಸರ್ ಗೆ ಕಾರಣವಾಗುವ ಪ್ರಮುಖ ಕಾರಣಗಳು ತಂಬಾಕು ದಾಸ್ಯ , ಅತಿಯಾದ ಮದ್ಯ ಸೇವನೆ ಹೆಚ್ಚಾಗಿರುವ ಯುವ ಪೀಳಿಗೆಯ ಮದ್ಯವ್ಯಸನಿಗಳು.

  • ಹೆಚ್ಚಾದ ನಗರ ಪರಿವರ್ತನೆ
  • ಹೆಚ್ಚಾದ ಅನಾರೋಗ್ಯಕಾರಕ ಆಹಾರ ಪದ್ಧತಿ ಇದರಿಂದ ಸ್ಥೂಲಕಾಯತೆ
  • ಹೆಚ್ಚಾದ ಜಾಗತೀಕರಣ

ಇವೆಲ್ಲದರಲ್ಲಿ ಮುಂಚೂಣಿಯಲ್ಲಿರುವುದು ತಂಬಾಕು ಮತ್ತು ಅದರ ಇತರ ಉತ್ಪನ್ನಗಳ ದಾಸ್ಯ ,ಭಾರತ ದೇಶದಲ್ಲಿ ಪ್ರತಿ 9 ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುತ್ತಿರುವುದು ವಿಷಾದನೀಯ.ಇದರಲ್ಲಿ ಮಹಿಳೆಯರು ಮತ್ತು ಪುರುಷರದ್ದು ಸಮಪಾಲು.ಪುರುಷರಲ್ಲಿ ಬಾಯಿ ಮುಖ ದವಡೆ ಮತ್ತು ಗಂಟಲು ಕ್ಯಾನ್ಸರ್ ಹೆಚ್ಚು ನಂತರದ ಸ್ಥಾನ ಶ್ವಾಸಕೋಶ , ಪ್ರಾಸ್ಟೇಟ್ ಗ್ರಂಥಿ ಮತ್ತುಳಿದ ಅಂಗಗಳು. ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಮತ್ತು ಗರ್ಭಕೋಶ, ಗರ್ಭಕಂಠ ಇತ್ತೀಚಿನ ದಿನಗಳಲ್ಲಿ ಬಾಯಿ ಮುಖ ದವಡೆ ಮತ್ತೂ ಗಂಟಲು ಕ್ಯಾನ್ಸರ್ ಮಹಿಳೆಯಲ್ಲೂ ಹೆಚ್ಚಾಗಿರುವುದು ಕಳವಳ ಕಾರಿ ಸಂಗತಿ ಇದೆಲ್ಲದರ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 2015 ರಿಂದ 2025 ರವರೆಗೆ ಶೇಕಡಾ 49% ರಿಂದ 57% ಗಣನೀಯವಾಗಿ ಏರಿಕೆ ಕಂಡಿದೆ.

ಪ್ರತಿ ಸಾಲಿನ ಹಾಗೆ ಈ ವರ್ಷದ ಧ್ಯೇಯ ವಾಕ್ಯ ವೈವಿಧ್ಯತೆಯಲ್ಲಿ ಏಕತೆ ಯ ಮುಖ್ಯ ಉದ್ದೇಶ :

  • ಕ್ಯಾನ್ಸರ್ ತಡೆಗಟ್ಟುವಿಕೆ
  • ಪ್ರಾರ್ಥಮಿಕ ಹಂತದಲ್ಲಿ ಪತ್ತೆಹಚ್ಚುವಿಕೆ
  • ಸಕಾಲದಲ್ಲಿ ಚಿಕಿತ್ಸೆ ಒದಗಿಸುವುದು
  • ಮಾನಸಿಕ ಆತ್ಮ ಸ್ಥೈರ್ಯ ತುಂಬುವುದು

ಇವೆಲ್ಲದರಿಂದ ಕ್ಯಾನ್ಸರ್ ಮಹಾಮಾರಿಯಿಂದ ಉ೦ಟಾಗುವ ನಷ್ಟ ಮತ್ತು ಮಾನಸಿಕ ತೊಡಕುಗಳನ್ನು ದೂರ ಮಾಡಲು ಸಹಾಯಕವಾಗಿದೆ.ಒಟ್ಟಾರೆ ಈ ಆಚರಣೆಯ ಮುಖ್ಯ ಉದ್ದೇಶ ಮಹಾಮಾರಿಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಿಕೆ ,ಕ್ಯಾನ್ಸರ್ ಗೆ ತುತ್ತಾದವರಿಗೆ ಗುಣಮುಖ ಹೊಂದುವ ಬಗೆ ತಿಳಿಯಪಡಿಸುವುದು ಹಾಗೂ ಕ್ಯಾನ್ಸರ್ ತಡೆಗಟ್ಟುವ ರೀತಿಯ ಮಾಹಿತಿ ಒದಗಿಸುವುದು.ಸರಿಯಾದ ಸಮಯದಲ್ಲಿ ವೈದ್ಯರ ಸಮಾಲೋಚನೆ ಹಾಗೂ ಉತ್ತಮ ಆರೋಗ್ಯಕರ ಆಹಾರಪದ್ಧತಿಯ, ಜೀವನ ಶೈಲಿ ಕಂಡುಕೊಳ್ಳುವುದರ ಮೂಲಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತಿ ಹೊಂದಬಹುದಾಗಿದೆ.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹ ಕ್ಯಾನ್ಸರ್ ಕಾಯಿಲೆಯಿಂದ ದೂರವಿರುವ ಪ್ರತಿಜ್ಞೆ ಮಾಡಬೇಕು ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ಮತ್ತು ಧೈರ್ಯ ತುಂಬಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವಂತೆ ಆಶಿಸಬೇಕು.ಮತ್ತು ದುರಭ್ಯಾಸ ಹೊಂದಿರುವವರು ಕಡ್ಡಾಯವಾಗಿ ಸ್ಕ್ರೀನಿಂಗ್ ಪರೀಕ್ಷೆಗೆ ಒಳಗಾಗಬೇಕು. ಆರಂಭಿಕ ಹಂತದಲ್ಲಿ ಪತ್ತೆಯಾಗಿದ್ದಲ್ಲಿ ತಕ್ಷಣ ಹತ್ತಿರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.ಮತ್ತು ಸ್ವಯಂ ಕೃತವಾಗಿ ಹೆಚ್.ಪಿ.ವಿ ಲಸಿಕೆ ಹಾಕಿಸಿಕೊಳ್ಳಿ ಇದರಿಂದ ಗರ್ಭಕೋಶ , ಗರ್ಭಕಂಠ ಕ್ಯಾನ್ಸರ್ ತಡೆಯಬಹುದಾಗಿದೆ.ಶಿಶ್ನ ಗ೦ಟಲು ಮಧ್ಯ ಗ೦ಟಲು ಕುಳಿ‌ಯಲ್ಲಿ ಉ೦ಟಾಗುವ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದಾಗಿದೆ.

Author

Dr.Amith K.P

Head and Neck Onco Surgeon | Editorial Department

Vishwaradhya Cancer Hospital & Research Institute


We need your feedback because it values us lot and helps us to improve and impact better and more, thank you for taking the time to provide your feedback.