Let's be Together

Extra info thumb
  • 9844458881
  • vishwaradhyacancerhospital2019@gmail.com

ರೇಡಿಕ್ಸಾಕ್ಟ್: ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಕ್ರಾಂ ತಿಕಾರಿ ತಂತ್ರಜ್ಞಾನ

Published on 06 June 2026

Blog Image

ಈ ಕಾಲಘಟ್ಟದ ಭೀತಿದಾಯಕ ಕಾಯಿಲೆ, ಶೀಘ್ರದಲ್ಲಿ ಗುರುತಿಸಿದರೆ ಚಿಕಿತ್ಸೆ ಸಾಧ್ಯವಾದರೂ, ತಡವಾದರೆ ಜೀವಕ್ಕೆ ಅಪಾಯ ಮಾಡುವ ರೋಗ ಕ್ಯಾನ್ಸರ್ . ಇದರ ನಿವಾರಣೆಗೆ ನಮ್ಮ ದಾವಣಗೆರೆಯ ," ಬಾಪೂಜಿ ವಿದ್ಯಾ ಸಂಸ್ಥೆಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ "ಯು ಆರೋಗ್ಯದ ಹಿತದೃಷ್ಟಿಯಿಂದ, ವಿಶ್ವಮಟ್ಟದ ರೆಡಿಯೋಥೆರಪಿಯಾದ ರೇಡಿಕ್ಸಾಕ್ಟ್ ಟೊಮೋಥೆರಪಿ ಚಿಕಿತ್ಸೆಯ ಶಕ್ತಿಯನ್ನು ಒಳಗೊಂಡಿದ್ದೇವೆ.ಈ ವಿಶಿಷ್ಟ ಆಧುನಿಕ ತಂತ್ರಜ್ಞಾನದ ಬಳಕೆ ಭಾರತದಲ್ಲಿ ಕೆಲವು ಆಸ್ಪತ್ರೆಯಲ್ಲಷ್ಟೇ ಜಾರಿಯಲ್ಲಿದ್ದು,ಇದು ನಮ್ಮಲ್ಲಿರುವುದೇ ನಮ್ಮ ವಿಶೇಷತೆಯಾಗಿದೆ. ನಿಖರ ಚಿಕಿತ್ಸೆ, ಕಡಿಮೆ ಪಾರದರ್ಶಕತೆ ಹಾಗೂ ಹೆಚ್ಚು ಪರಿಣಾಮಕಾರಿತ್ವದ ಮೂಲಕ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತದೆ.

ರೇಡಿಕ್ಸಾಕ್ಟ್ ಚಿಕಿತ್ಸೆ ಎಂದರೇನು ?

ರೇಡಿಕ್ಸಾಕ್ಟ್ ಚಿಕಿತ್ಸೆ ಎಂಬುದು ಟೋಮೋಥೆರಪಿ ಎಂಬ ಉನ್ನತ ತಂತ್ರಜ್ಞಾನದ ಸುಧಾರಿತ ರೂಪವಾಗಿದೆ.ಇದು ಕ್ಯಾನ್ಸರ್ ಕೋಶಗಳ ಮೇಲೆ ನಿಖರವಾದ ಲೇಸರ್ ಶಕ್ತಿ ಬಳಸುವ ಮೂಲಕ ಚಿಕಿತ್ಸೆ ನೀಡುತ್ತದೆ.ರೋಗಿಯ ದೇಹದ ಭಾಗವನ್ನು ಚಿತ್ರಿಸಿ ,ಕೇವಲ ಕ್ಯಾನ್ಸರ್ ಕೋಶಗಳಿಗೆ ಶಕ್ತಿ ಪ್ರಯೋಗದ ಮೂಲಕ ಚಿಕಿತ್ಸೆ ಒದಗಿಸುತ್ತದೆ.ಇದು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದಂತೆ, ಆರೋಗ್ಯಕರ ಅಂಗಾಂಗಗಳಿಗೆ ಹಾನಿಯಾಗದಂತೆ ಕಾರ್ಯ ನಿರ್ವಹಿಸುತ್ತದೆ.ವಿಕಿರಣಗಳಿಂದ ಮಾಡುವ ಚಿಕಿತ್ಸೆ ದೇಹದ ನಿರ್ಧಿಷ್ಟ ಭಾಗವನ್ನು ಕೇಂದ್ರಿಕರಿಸಿ ನೋವಿನ ಆಳಕ್ಕೆ ಇಳಿದು , ಕಿರಣಗಳನ್ನು ಒಡ್ಡಿ ರೋಗಯುಕ್ತ ಕೋಶಗಳನ್ನು ನಾಶ ಮಾಡುವ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಮರುಕಳಿಸವುದನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ಲಕ್ಷಣಗಳನ್ನು ನಿವಾರಿಸಲು ಈ ಚಿಕಿತ್ಸೆಯನ್ನು ಬಳಕೆ ಮಾಡುತ್ತಾರೆ.ತಲುಪಲು ಕಷ್ಟಕರವಾದ ಸಂಕೀರ್ಣ ಗಡ್ಡೆಗಳಿಗೆ ಚಿಕಿತ್ಸೆ ನೀಡಲು ಈ ಯಂತ್ರವು ಅನುವು ಮಾಡಿಕೊಡುತ್ತದೆ.ಮತ್ತು ಈ ಚಿಕಿತ್ಸೆಯು ಗುಣಮುಖ ಹೊಂದಲು ಹೆಚ್ಚು ಸಹಕಾರಿಯಾಗಿದ್ದು, ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ ಎನ್ನುವ ಮೆಚ್ಚುಗೆ ಮಾತನ್ನು ರೋಗಿಗಳು ಮತ್ತವರ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಯ ಬಗೆಗಳು :ಎರಡು ವಿಧ

  • ಬಾಹ್ಯ ರೇಡಿಯೋ ಚಿಕಿತ್ಸೆ
  • ಆಂತರಿಕ ರೇಡಿಯೋ ಚಿಕಿತ್ಸೆ

ರೇಡಿಯೋ ಚಿಕಿತ್ಸಾಕ್ರಮದಲ್ಲಿ ಸಾಮಾನ್ಯವಾಗಿ 10 ರಿಂದ 15 ನಿಮಿಷದ ಅವಧಿಯ ಕಿರುಚಿಕಿತ್ಸೆಯಾಗಿರುತ್ತದೆ. ಎಷ್ಟು ದಿನದ ಚಿಕಿತ್ಸೆ , ಯಾವ ಚಿಕಿತ್ಸಾ ತಂತ್ರಗಳನ್ನು ಬಳಸಬೇಕೆನ್ನುವುದು ರೋಗಿಯ ಕ್ಯಾನ್ಸರ್ ವಿಧ ಮತ್ತು ಕ್ಯಾನ್ಸರ್ ಹಂತದ ಮೂಲಕ ನಿರ್ಧಾರವಾಗುತ್ತದೆ.

ರೇಡಿಕ್ಸಾಕ್ಟ್ ಚಿಕಿತ್ಸಾ ತಂತ್ರಗಳು : ಇದರಲ್ಲಿ ಪ್ರಮುಖ

ದೈನಂದಿನ ಚಿತ್ರಣದೊಂದಿಗೆ ಮಾರ್ಗದರ್ಶನ :

ಪ್ರತಿ ಚಿಕಿತ್ಸೆಗೂ ಮೊದಲು ಸಿಟಿಸ್ಕ್ಯಾ ನ್ ಮಾಡಲಾಗುತ್ತದೆ.ಇದು ಟ್ಯೂಮರ್ ಸ್ಥಿತಿಯನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತದೆ.ಮತ್ತು ಚಿಕಿತ್ಸಾ ಸಮಯದಲ್ಲಿ ಯಾವುದೇ ಚಲನೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

ಸಿಂಕ್ರೊನಿ ತಂತ್ರಜ್ಞಾನ :

ಈ ತಂತ್ರಜ್ಞಾನವು ಟ್ಯುಮರ್ ಚಲನೆಗಳನ್ನು ಕಂಡುಹಿಡಿಯುತ್ತದೆ ಮತ್ತು ಚಿಕಿತ್ಸಾ ಸಮಯದಲ್ಲಿ ತಕ್ಷಣ ಹೊಂದಾಣಿಕೆಯನ್ನು ಮಾಡುತ್ತದೆ.ಇದು ಉಸಿರಾಟ ಅಥವಾ ಇತರ ಚಲನೆಗಳಿಂದ ಸಂಭವಿಸಬಹುದಾದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇಂಥ ಶ್ರೇ ಷ್ಟ ಆಧುನಿಕ ತಂತ್ರಜ್ಞಾನವು ನಮ್ಮ ದಾವಣಗೆರೆಯಲ್ಲಿದ್ದು ಇದನ್ನು ಯಶಸ್ವಿಯಾಗಿ ಬಳಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ, ನಮ್ಮ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ,ತನ್ನ ವಿಶಿಷ್ಟತೆಗಳೊಂದಿಗೆ ರೋಗಿಗಳಿಗೆ ಉತ್ತಮ ಭರವಸೆಯಾಗಿ ಬದುಕುವ ಬೆಂಬಲವಾಗಿ ಸಹಾಯ ಮಾಡುತ್ತದೆ.ನಮ್ಮ ಈ ತಂತ್ರಜ್ಞಾನವು ದಾವಣಗೆರೆಯ ಸಹಿತ ಭಾರತದ ಹಲವಾರು ಭಾಗಗಳಿಂದ ಬರುವ ರೋಗಿಗಳಿಗೆ ನಿಖರವಾದ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಕ್ರಾಂತಿಕಾರಿಯಾಗಿ ಉಳಿದಿದೆ.ವೈದ್ಯಕೀಯ ಕ್ಷೇತ್ರದಲ್ಲಾದ ಯಶಸ್ವಿ ಸಂಶೋಧನೆ ಇದಾಗಿದ್ದು,ಈ ಚಿಕಿತ್ಸೆ ರೋಗಿಯ ಜೀವನದ ಗುಣಮಟ್ಟವನ್ನು ಹೆಚ್ಚಿಸಿದ್ದು ,ನಮ್ಮ ಸಂಸ್ಥೆಯ ಮೂಲಕ ಶ್ರೇಷ್ಟ ಚಿಕಿತ್ಸೆಯನ್ನು , ಜನಸಾಮಾನ್ಯರಿಗೂ ತಲುಪುವಂತೆ ಮಾಡಿದೆ.

"ರೇಡಿಕ್ಸಾ ಕ್ಟ್ ಚಿಕಿತ್ಸೆಯಲ್ಲಿ , 360 ಡಿಗ್ರಿಯಲ್ಲಿ ವಿಕಿರಣ ಚಲಿಸುವುದರಿಂದ ಯಾವುದೇ ಮೂಲೆಯಲ್ಲಿ ಟ್ಯೂಮರ್ ಕಂಡು ಬಂದರೂ , ಅದನ್ನು ಗುರುತಿಸಿ ಚಿಕಿತ್ಸೆ ನೀಡಬಹು ದು , ಈ ಆಧುನಿಕ ವಿಧಾನ ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಶಾ ಕಿರಣವಾಗಿ ಹೊರಹೊಮ್ಮಿ ದೆ "

- ಡಾ .ರೇವಂತ್ ಎಮ್.ಕಂಡ್ಕೆ , ರೇಡಿಯೇಷನ್ ಆಂಕೋಲಜಿ

Author

ಅರ್ಚನಾ .ಆರ್

ಕೌನ್ಸಿಲರ್

ವಿಶ್ವಾರಾಧ್ಯ ಕ್ಯಾ ನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ದಾವಣಗೆರೆ